Popular posts from this blog
ಕರುಣಾಳು ಬಾ ಬೆಳಕೆ..ಅಂಕೋಲೆಯ ಶಿಕ್ಷಣ ದಾನಿ ಸ.ಪ.ಗಾಂವಕರ 🙏🙏
#ಉತ್ತರಕನ್ನಡಜಿಲ್ಲೆ #ಮಹಾನ್ ಚೇತನ #ಸ.ಪ.ಗಾವಂಕರ #ಶತಮಾನೋತ್ಸವ #ನಾಡವರಸಂಘ #ಕರ್ನಾಟಕದಬಾರ್ಡೋಲಿ #ನಮ್ಮಹೆಮ್ಮೆ #Congratulations 🙏🙏🌹🌹🌹 ಇಂದು ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಅನೇಕ ಮಹನೀಯರ ತ್ಯಾಗ ಹಾಗೂ ಬಲಿದಾನವೇ ಕಾರಣ. ಅಂತಹ ಮಹನೀಯರ ಪಟ್ಟಿಯಲ್ಲಿ ದಿನಕರ ದೇಸಾಯಿಯವರ ಜೊತೆಗೆ ಸರಿಸಮನಾದ ನಿಲ್ಲುವ ಹಳೆಯ ತಲೆಮಾರಿನ ಇನ್ನೊಂದು ಹೆಸರು "ಸಣ್ಣಪ್ಪ ಪರಮೇಶ್ವರ ಗಾವಂಕರ". ಅಂತಹ ಮೇರು ವ್ಯಕ್ತಿತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವದು ನಮ್ಮೆಲ್ಲರ ಕರ್ತವ್ಯವೂ ಹೌದು. ------------------------------------------------------------ ಸಣ್ಣಪ್ಪ ಪರಮೇಶ್ವರ ಗಾಂವಕರ , 11 ಜನವರಿ 1885 ರಂದು ಕುಮಟಾ ತಾಲ್ಲೂಕಿನ ಪುಟ್ಟ ಗ್ರಾಮ ತೊರ್ಕೆಯಲ್ಲಿ ಜನಿಸಿದರು. ಅವರು ಅದೇ ತಾಲ್ಲೂಕಿನ ತದಡಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಮ್ಮ 40 ನೇ ವಯಸ್ಸಿನಲ್ಲಿ (1925), ಗಾಂವಕರರು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನಿಂದ ಬಿ. ಎ ಪದವಿಯನ್ನು ಪಡೆದರು. ಅವರು ಹುಬ್ಬಳ್ಳಿ ಪುರಸಭೆಯಲ್ಲಿ ಅಧಿಕಾರಿಯಾಗಿದ್ದರು. 1942 ರಲ್ಲಿ ತಮ್ಮ ನಿವೃತ್ತಿಯ ನಂತರ, ಸ.ಪ. ಗಾಂವಕರರು ಅವರು "ಕ್ವಿಟ್ ಇಂಡಿಯಾ ಚಳುವಳಿ "ಯಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ...
ನನ್ನ ಅವ್ವ 💕
*ಅವ್ವ 🥰* ಮಮತೆಯ ಮಡಿಲಲಿ ಬೆಚ್ಚನೆ ಮಲಗಿಸಿ ಅಮೃತವ ಉಣಿಸಿದೆ ನೀನು.. ಹಣೆ ನೇವರಿಸಿ ಸಾಂತ್ವನ ಹೇಳುತ ಮುತ್ತನು ನೀಡಿದೆ ನೀನು.. ಎನ್ನಯ ಮೊದಲ ಪ್ರತಿ-ಹೆಜ್ಜೆಗಳಲ್ಲಿ ಕಣ್ಣಾಗಿರುವೆ ನೀನು.. ಎನ್ನಯ ತೊದಲಿಗೆ ಅರ್ಥವ ನೀಡುವ ಮಾತಾಗಿರುವೆ ನೀನು.. ಅವ್ವ ನಿನ್ನಯ ಸೆರಗಿನ ಋಣವ ಹೇಗೆ ತೀರಿಸಲಿ ನಾನು.. ಗುಮ್ಮನ ಓಡಿಸಿ ಎನ್ನಯ ಮನದಲಿ ಧೈರ್ಯವ ತುಂಬಿದೆ ನೀನು.. ಎನ್ನಯ ಸೋಲಲಿ ನೆರಳಾಗಿದ್ದು ಸರಿ- ದಾರಿಯ ತೋರಿದೆ ನೀನು.. ನಿನ್ನಯ ಖುಷಿಯನು ಎನ್ನಲಿ ಕಂಡು ಸಹನೆಯ ಸಾರಿದೆ ನೀನು.. ಕರುಣೆಯ ಕಡಲಲಿ ತೇಲುತ ಸಾಗುವ ನಿರ್ಭಯ ನೌಕೆಯು ನಾನು.. ಕಾಡುವ ಕಷ್ಟವ ಮೀರುತ ಸಾಗುವ ಭರವಸೆಯ-ಹುಟ್ಟು ನೀನು.. ಅವ್ವ ಎನ್ನುವ ಎರಡಕ್ಷರದಲೆ ಇದೆ ಎಲ್ಲಿಲ್ಲದ ಸ್ಫೂರ್ತಿ.. ನಿನ್ನಯ ನೆನಪೆ ನನಗದು ಕಲ್ಪತರು... ಮರೆಯಲಾಗದ ನೋವು... Missing you ಅವ್ವ ❤️❤️
Comments
Post a Comment