ನಾನು ನಿನ್ನ ಭೂಮಿ..ಉಳಿಸಿಕೋ ನನ್ನನ್ನು ....ಎಲೆ ಮಾನವ !! ----------------------------------------------------- ನಾನು ಭೂಮಿ ಒoಬತ್ತು ಗ್ರಹಗಳಿಗಿoತ ಭಿನ್ನ ನಾನು!ನೀಲಿ ನನ್ನ ಕಾಯ ಹಸಿರು ನನ್ನ ಮೈ ಕಾoತಿಹಿಮವೆ ನನ್ನ ಶಿರೋ ಮುಕುಟ,ಸೌಂದರ್ಯ ಯದ ಖನಿ ನಾನು!ತಿರುಗುವೆನು ನನ್ನಷ್ಟಕ್ಕೆ ನನ್ನ ಸುತ್ತ ನಾನು ಮಾಡುತ್ತಾ ಸಾಗುತ್ತಿರುವೆ ಹಗಲು -ರಾತ್ರಿಯ ಕಣ್ಣಾಮುಚ್ಚಾಲೆಯ ನಾನು! ದಣಿವರಿಯದೇ ಸುತ್ತುತ್ತಿರುವೆ ಸೂರ್ಯನ ಸುತ್ತ ನಾನು! ಬದಲಿಸುತ್ತಿರುವೆ ನನ್ನ ಮೈಕಾಂತಿಯ ಋತುವಿಗನುಗುಣವಾಗಿ ನಾನು! ಕಟ್ಟುವೆನು ಮೋಡವ ,ಸುರಿಸುವೆನು ಮಳೆಯಹಸಿರುಡುಗೆಯ ತೊಟ್ಟು ಸಂಭ್ರಮಿಸುವೆನು ನಾನು! ನನ್ನೊಡಲು ತುಂಬಿದೆ ಜೀವ ವೈವಿಧ್ಯಗಳ ರಾಶಿ!ಒಡಲ ತುಂಬ ತುಂಬಿದೆ ನಿಧಿ-ಖನಿಜಗಳ ರಾಶಿ! ಚಂದ್ರ ನನಗೆ ಉಪಗ್ರಹ ಸುತ್ತುತಿರುವ ತರತರ,ಹುಣ್ಣಿಮೆ- ಅಮಾವಾಸ್ಯೆಯ ಆಯಸ್ಕಾಂತದ ಪರಿಕರ ! ನನ್ನ ತುಂಬ ಪ್ರಾಣವಾಯು ಉಸಿರು ಕೊಡುವೆ ಜೀವಕೆ ವೈವಿಧ್ಯಕೆ ಇಂಗಾಲವ ಹೀರಿಕೊಂಡು ಇಡುವೆ ಸ್ವಸ್ಥ ಜೀವಕೆ ! ಪೊರೆವ ನಿಮ್ಮ ಒಡಲ ತುಂಬ ಮಮತೆಯ ಮಾತೆಯಾಗಿ!ಸಲಹುತಿರುವೆ ಎಲ್ಲರನ್ನುಭೂಮಿತಾಯಿಯಾಗಿ! ನನ್ನೊಳಗಿನ ಜೀವಿಗಳಲ್ಲಿ ಮಾನವ ನೀನು ಬಲು ವಿಶೇಷ ! ಯಾವ ಜೀವಿಗಳಲ್ಲೂ ಇಲ್ಲದ ಗುಣ ವೈವಿಧ್ಯ,ಆದರೆ ತುಂಬಿದೆ ದುರಾಸೆಯ ವಿಷ!ಅಭಿವೃದ್ಧಿಯ ಹೆಸರಿನಲ್ಲಿ ದೋಚುತಿರುವೆ ನನ್ನೊಡಲ ಖಾಲಿಮಾಡುತಿರುವೆ ತುಂಬಿದ ನಿಧಿ-ಖನಿಜಗಳ ಒಡಲ! ನಿನ್ನ ದುರಾಸೆಯ ದಳ್ಳುರಿಗೆ ಬಲಿ ಕೊಡುತ್ತಿರುವೆ ನನ್ನ ಮಡಿಲ! ನನ್ನೊಡಲ ಬಗಿದು ಬರಿದು ಮಾಡುತ್ತಿರುವೆ!!ಕಾರ್ಖಾನೆಯ ದೂಷಿತ ಹೊಗೆಯ ಬಿಟ್ಟು ಪರಿಸರವ ನಾಶಪಡಿಸುತಿರುವೆ!! ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣಹೋಮ ಮಾಡುತ್ತಿರುವೆ!! ನೀ ಬಿಡುತ್ತಿರುವೆ ವಿಷಯುಕ್ರ ಮಲೀನ ನೀರನು ನನ್ನ ನೀಲಿ ಮಡಿಲಿಗೆ.!! ನಿನ್ನದಲ್ಲದ ಕಾಡಿಗೆ ನುಗ್ಗಿ ಪ್ರಾಣಿ- ಪಕ್ಷಿಗಳ ಸಂತತಿ ಅಳಿಸುತ್ತಿರುವೆ!! ಕಾಡಿನ ಬೆಲೆಬಾಳುವ ಮರಗಳ ಮಾರಣಹೋಮ ಹೋಮ ಮಾಡಿ ನಿನ್ನ ಬೊಕ್ಕಸವ ತುಂಬಿಕೊಂಡು ಕಾಳ್ಗಿಚ್ಚಿನಿಂದ ನನ್ನ ಹಸಿರ ಮೈಕಾಂತಿಯ ಸುಡುತ್ತಿರುವೆ!!ಒಂದೊ,ಎರಡೋ......ಲೆಕ್ಕವೇ ಇಲ್ಲದ ದೌರ್ಜನ್ಯಗಳು ನನ್ನ ಮೇಲೆ!! ನೀ ಮಾಡುತ್ತಿರುವ ಕುಕೃತ್ಯದಿಂದ ನನ್ನೊಡಲು ಬರಿದಾಗುತ್ತಿದೆ, ಪ್ರಾಣಿ-ಪಕ್ಷಿಗಳ ಸಂತತಿ ನಶಿಸಿ ಹೋಗುತ್ತಿದೆ !! ನನ್ನೊಡಲು ಕಾದ ಕಾವಲಿಯಂತಾಗುತ್ತಿದೆ ನನ್ನ ಹಿಮ ಮುಕುಟ ಕರಗುತ್ತಿದೆ!! ಮಹಾಮಾರಿ ವೈರಸಗಳಿಂದ ಮುಖ-ಮೋರೆ ಮುಚ್ಚಿಕೊಂಡು ಮನೆಯನ್ನು ಪಂಜರವನ್ನಾಗಿಸಿ ಕೊಂಡಿರುವೆ!! ಜೀವಾನಿಲವಿಲ್ಲದೆ ವಿಲ -ವಿಲ ಒದ್ದಾಡಿ ಹುಳುಗಳಂತೆ ಸಾಯುತ್ತಿರುವೆ....ಇನ್ನಾದರೂ ಎಚ್ಚತ್ತುಕೊ ಮನುಜ ಎಚ್ಚತ್ತುಕೊ ....ನನ್ನ ಉಳಿಸಿಕೋ ಉಳಿಸಿಕೋ ನನ್ನ!!! 😢😢😢

Comments

Popular posts from this blog

ಕರುಣಾಳು ಬಾ ಬೆಳಕೆ..ಅಂಕೋಲೆಯ ಶಿಕ್ಷಣ ದಾನಿ ಸ.ಪ.ಗಾಂವಕರ 🙏🙏

ನನ್ನ ಅವ್ವ 💕