ನನ್ನ ಅವ್ವ 💕
ಮಮತೆಯ ಮಡಿಲಲಿ ಬೆಚ್ಚನೆ ಮಲಗಿಸಿ
ಅಮೃತವ ಉಣಿಸಿದೆ ನೀನು..
ಹಣೆ ನೇವರಿಸಿ ಸಾಂತ್ವನ ಹೇಳುತ
ಮುತ್ತನು ನೀಡಿದೆ ನೀನು..
ಎನ್ನಯ ಮೊದಲ ಪ್ರತಿ-ಹೆಜ್ಜೆಗಳಲ್ಲಿ
ಕಣ್ಣಾಗಿರುವೆ ನೀನು..
ಎನ್ನಯ ತೊದಲಿಗೆ ಅರ್ಥವ ನೀಡುವ
ಮಾತಾಗಿರುವೆ ನೀನು..
ಅವ್ವ ನಿನ್ನಯ ಸೆರಗಿನ ಋಣವ
ಹೇಗೆ ತೀರಿಸಲಿ ನಾನು..
ಗುಮ್ಮನ ಓಡಿಸಿ ಎನ್ನಯ ಮನದಲಿ
ಧೈರ್ಯವ ತುಂಬಿದೆ ನೀನು..
ಎನ್ನಯ ಸೋಲಲಿ ನೆರಳಾಗಿದ್ದು ಸರಿ-
ದಾರಿಯ ತೋರಿದೆ ನೀನು..
ನಿನ್ನಯ ಖುಷಿಯನು ಎನ್ನಲಿ ಕಂಡು
ಸಹನೆಯ ಸಾರಿದೆ ನೀನು..
ಕರುಣೆಯ ಕಡಲಲಿ ತೇಲುತ ಸಾಗುವ
ನಿರ್ಭಯ ನೌಕೆಯು ನಾನು..
ಕಾಡುವ ಕಷ್ಟವ ಮೀರುತ ಸಾಗುವ
ಭರವಸೆಯ-ಹುಟ್ಟು ನೀನು..
ಅವ್ವ ಎನ್ನುವ ಎರಡಕ್ಷರದಲೆ ಇದೆ
ಎಲ್ಲಿಲ್ಲದ ಸ್ಫೂರ್ತಿ..
ನಿನ್ನಯ ನೆನಪೆ ನನಗದು ಕಲ್ಪತರು...
ಮರೆಯಲಾಗದ ನೋವು...
Missing you ಅವ್ವ ❤️❤️
Comments
Post a Comment