ನನ್ನವ್ವ ಹನಮು

ಇವಳು ಹಳ್ಳಿಯ ಮುಗ್ಧೆ..ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಪುಟ್ಟ ಗ್ರಾಮ ಬೇಲೇಕೇರಿಯಲ್ಲಿ.ಬೀರಪ್ಪ -ವೆಂಕಮ್ಮ ದಂಪತಿಯರ ಎರಡನೆಯ ಪುತ್ರಿಯಾಗಿ ಜನಿಸಿದ ಹನಮು ಶಾಲೆ ಕಲಿತದ್ದು ಕೇವಲ ಮೂರನೆಯ ತರಗತಿಯವರೆಗೆ ಮಾತ್ರ. ಯಾಕೆ ಶಾಲೆ ಕಲೆಯಲಿಲ್ಲ ಎಂದು ಕೇಳಿದಾಗ  ಅವಳು ಹೇಳುವ ಉತ್ತರ "ನನ್ನ ಸಣ್ಣ ತಮ್ಮನನ್ನು ಆಡಿಸಲು ನನ್ನ ತಂದೆ-ತಾಯಿ ಶಾಲೆ ಬಿಡಿಸಿದರು". 
ಹೌದು, ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರಲ್ಲಿಲ್ಲ ! 

ಅನುಕೂಲ ಇದ್ದವರು ಏಳನೆಯ ತರಗತಿಯ ವರೆಗೆ ಕಲಿಸಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಬಿಡುತ್ತಿದ್ದರು. ಆಗಿನ ಕಾಲದಲ್ಲಿ ಏಳನೆಯ ತರಗತಿಯವರೆಗೆ ಕಲಿತರೆ ಪ್ರಾಥಮಿಕ ಶಾಲೆಯ ಶಿಕ್ಷಕಿಯರ ನೌಕರಿ ಸಿಗುತ್ತಿತ್ತು.
ಅವಳಿಗೆ ಹದಿನೈದು ತುಂಬುವ ಮೊದಲೇ ತಮ್ಮ ಸಂಬಂಧಿಕರಾದ ಶೀಳ್ಯಯ ರಾಮ ಅನಂತ ನಾಯಕರ ಎರಡನೆ ಮಗನಾದ ಬೊಮ್ಮಯ್ಯನಿಗೆ ಮದುವೆ ಮಾಡಿಕೊಟ್ಟು ಬಿಟ್ಟಿದ್ದರು.ಬೊಮ್ಮಯ್ಯ ಅಯ್ಯೋಧೆಯ ಸಂಸ್ಕೃತ  ಪಾಠಶಾಲೆಯಲ್ಲಿ ಶಿಕ್ಷಣ ಮುಗಿಸಿ ಅಂಕೋಲಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗಿನ ಕಾಲದ ವೇತನ ತುಂಬ ಕಡಿಮೆ ,ಸಂಸಾರ ಸಾಗಿಸಲು ಸಾಧ್ಯವಾಗುತ್ತಿರಲ್ಲಿಲ್ಲ . ಮುಂದೆ ಶಿಕ್ಷಣ  ಮುಂದುವರಿಸಿದ  ಬೊಮ್ಮಯ್ಯ  ಮಾಸ್ತರ ಸಂಸ್ಕೃತದಲ್ಲಿ ವಿಶಾರದ  (ಎಮ್. ಎ ಗೆ ಸಮಾನ) ಮುಗಿಸುತ್ತಾರೆ. ಆ ಸಂದರ್ಭದಲ್ಲಿ ಸಂಸಾರದ  ನೊಗವನ್ನು ಒಬ್ಬ ಗಂಡಸಿಗಿಂತ  ಹೆಚ್ಚಾಗಿ ನಿಭಾಯಿಸಿದ ದಿಟ್ಟೆ ಅವಳು. ಒಂದಾದರೊಂದತೆ  ಐದು ಹೆಣ್ಣುಮಕ್ಕಳನ್ನು ಪಡೆದು ಗಂಡು ಮಗುವಿಗಾಗಿ ಹಂಬಲಿಸಿ ಆರನೆಯ ಮಗು ಗಂಡಾದಾಗ ಸಂಭ್ರಮಿಸಿದ ಮಾತೆ,ಇನ್ನೊಂದು ಮಗು ಗಂಡಾಗಬಹುದೆಂದು ಏಳನೆಯ ಹೆಣ್ಣು ಮಗುವನ್ನು ಪಡೆದ ಏಳು ಮಕ್ಕಳ ಮಹಾತಾಯಿ ಇವಳು. ಸಂಸಾರದ ಗಾತ್ರ ಹೆಚ್ಚಾದಂತೆ ಖರ್ಚು- ವೆಚ್ಚವನ್ನು ನಿಭಾಯಿಸಲಾಗದೆ ಇದ್ದ ತುಂಡು ಭೂಮಿಯಲ್ಲಿ ಗಂಡಾಗಿ ದುಡಿದ ಗಟ್ಟಿಗಿತ್ತಿ. ತವರಿನಿಂದ ಬಳುವಳಿಯಾಗಿ ಬಂದ ಒಂದು ಆಕಳಿನಿಂದ ಹಸುವಿನ ಕೊಟ್ಟಿಗೆಯನ್ನು ತೆರೆದು ಉಪಜೀವನಕ್ಕಾಗಿ ಹೈನುಗಾರಿಕೆಯನ್ನು ಮಾಡಿ  ಎತ್ತು, ಎಮ್ಮೆ ಹಾಗೂ ಆಕಳುಗಳ ಸಂಖ್ಯೆಯ ನ್ನು ಹೈದಿನೈದಕ್ಕೆ ಏರಿಸಿದ ಗೋಮಾತೆ ಇವಳು.
ನನ್ನವ್ವ ಚತುರೆ,ದಿಟ್ಟೆ ಹಾಗೂ ಚಲಗಾತಿ. 
ಅವಳಿಗೆ ಗೊತ್ತಿಲ್ಲದ ವಿದ್ಯೆಯೇ ಇಲ್ಲ. 
ಮಣ್ಣಲ್ಲಿ ಮಣ್ಣಾಗಿ ದುಡಿದು  ಕಸದಿಂದ ರಸ ತೆಗೆದು ,ತನ್ನ ಎಲ್ಲ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ ಮಹಾಮಾತೆ ಅವಳು. 
 ಅಂದು ಮೂರನೆ ತರಗತಿಯವರೆಗೆ ಕಲಿತ ಅವಳ ಮಕ್ಕಳು ಇಂದು ಸ್ನಾತಕೋತ್ತರ   ಪದವೀಧರರು  ಹಾಗೂ ಡಾಕ್ಟರೇಟ್ ಪದವಿಯನ್ನು ಸಹ ಮುಗಿಸಿದ್ದಾರೆ.
ಹನಮು ಶೀಳ್ಯಯ ಊರಿಗೆ ನಾಟಿವೈದೆಯೂ ಹೌದು.ಔಷಧೀಯ ಸಸ್ಯಗಳ ಬಗೆಗಿನ ಅವಳ ಜ್ಞಾನ ಅಪಾರ. ಗಿಡ ಮೂಲಿಕೆಯ ಔಷಧಗಳಿಂದ ಎಷ್ಟೋ ಶಿಶುಗಳನ್ನು ಬದುಕಿಸಿದ ಗರಿಮೆ ಅವಳದು. 
 ಶಿಶುಗಳ ಆರೈಕೆಯಲ್ಲೂ  ಅವಳು ಸಿದ್ದಹಸ್ತಳು.

ಹೌದು! ಇಂದು ಇವಳು ಎಂಬತೈದರ ಚಿರ ಯೌವ್ವನೆ...ತೊಂಭತ್ತಾರರ ಪತಿ ಬೊಮ್ಮಯ್ಯ ಮಾಸ್ತರರ ಜೊತೆಗೆ ಇಳಿಸಂಜೆಯ  ಪಯಣ...ಮಕ್ಕಳು,ಮೊಮ್ಮಕ್ಕಳು,ಮರಿಮೊಮ್ಮನ್ನು ಕಂಡ  ಅಪರೂಪದ ದಾಂಪತ್ಯ ಜೀವನ. 
ಇದು ಮಹಿಳಾ ಸಬಲೀಕರಣವಲ್ಲವೇ...
ಹೌದು ಅವಳೇ ನನ್ನವ್ವ  ಹನಮು........!!!!ನಮ್ಮಲ್ಲಿ ಇಂತಹವರು ಇನ್ನೆಷ್ಟೋ...❤💖🙏🙏🙏🙏
Yes...definitely it's RURAL GRID.😊❤


.  
 
      



 
  

Comments

Popular posts from this blog

ನನ್ನ ಅವ್ವ 💕