"ಹೋಳಿ ಹುಣ್ಣಿಮೆ "ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ " ಅಂಕೋಲಾದ ಸುಗ್ಗಿ ಹಬ್ಬ "🥳🥳🥳🌹🌹🌹🌹🍀☘🌲🌳 ವಿಡಿಯೋದ ವಿಶೇಷತೆ: ಬೆಳ್ಳಿಯ ಕುಚ್ಚ ಮತ್ತು ಬೆಳ್ಳಿಯ ಕಿರೀಟ, ಬೆಳಸೆ ಸುಗ್ಗಿ ಅಂಕೋಲಾ ----------‐------‐----------‐------------------------------- ಉತ್ತರ ಕನ್ನಡ ಜಿಲ್ಲೆ ಸಾಂಪ್ರದಾಯಿಕ ಜಾನಪದ ಕಲೆಗಳಾದ ಯಕ್ಷಗಾನ ,ಬೇಡರವೇಷ ,ಸುಗ್ಗಿ ಕುಣಿತ ಮುಂತಾದವೂಗಳ ತವರರೂರು. ಹೋಳಿ ಹುಣ್ಣಿಮೆಯ ಬಣ್ಣದ ಓಕುಲಿ ಹಬ್ಬವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ವಾಗಿ "ಸುಗ್ಗಿ ಹಬ್ಬ "ವೆಂದು ಆಚರಿಸಲಾಗುತ್ತದೆ. ಜಿಲ್ಲೆಯ ಬುಡಕಟ್ಟು ಜನಾಂಗದ ಹಾಲಕ್ಕಿ ಒಕ್ಕಲಿಗರು ಸುಗ್ಗಿ ಹಬ್ಬ ವನ್ನು ಭಕ್ತಿ -ಭಾವದಿಂದ ಐದು ದಿನ ಆಚಾರಿಸುತ್ತಾರೆ . ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಜಿಲ್ಲೆಗಳಲ್ಲಿ ವಿಶಿಷ್ಟವಾಗಿ ಕಂಡು ಬರುತ್ತಾರೆ. ಇವರ ಮೂಲ ಕಸಬು ಕೃಷಿ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಇಂದು ಕೃಷಿ ಜೀವಂತವಾಗಿದೆ ಎಂದರೆ ಅದಕ್ಕೆ "ಹಾಲಕ್ಕಿ ಒಕ್ಕಲಿಗರು " ಎಂದರೆ ಅತಿಶಯೋಕ್ತಿ ಆಗಲಾರದು . ಅಂಕೋಲಾ ತಾಲ್ಲೂಕಿನ ಬೆಳಂಬಾರ,ಬಡಿಗೇರಿ,ಹಡವ,ಬೆಳಸೆ ಮುಂತಾದ ಊರುಗಳಲ್ಲಿ ನೆಲೆಸಿರುವ ಹಾಲಕ್ಕಿ ಒಕ್ಕಲಿಗರು ತರಕಾರಿ, ಹಣ್ಣು- ಹಂಪಲುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆದು ಜಿಲ್ಲೆಯ ವಿವಿಧ ಭಾಗಗಳಲ...
Posts
ನನ್ನ ಅವ್ವ 💕
- Get link
- X
- Other Apps
*ಅವ್ವ 🥰* ಮಮತೆಯ ಮಡಿಲಲಿ ಬೆಚ್ಚನೆ ಮಲಗಿಸಿ ಅಮೃತವ ಉಣಿಸಿದೆ ನೀನು.. ಹಣೆ ನೇವರಿಸಿ ಸಾಂತ್ವನ ಹೇಳುತ ಮುತ್ತನು ನೀಡಿದೆ ನೀನು.. ಎನ್ನಯ ಮೊದಲ ಪ್ರತಿ-ಹೆಜ್ಜೆಗಳಲ್ಲಿ ಕಣ್ಣಾಗಿರುವೆ ನೀನು.. ಎನ್ನಯ ತೊದಲಿಗೆ ಅರ್ಥವ ನೀಡುವ ಮಾತಾಗಿರುವೆ ನೀನು.. ಅವ್ವ ನಿನ್ನಯ ಸೆರಗಿನ ಋಣವ ಹೇಗೆ ತೀರಿಸಲಿ ನಾನು.. ಗುಮ್ಮನ ಓಡಿಸಿ ಎನ್ನಯ ಮನದಲಿ ಧೈರ್ಯವ ತುಂಬಿದೆ ನೀನು.. ಎನ್ನಯ ಸೋಲಲಿ ನೆರಳಾಗಿದ್ದು ಸರಿ- ದಾರಿಯ ತೋರಿದೆ ನೀನು.. ನಿನ್ನಯ ಖುಷಿಯನು ಎನ್ನಲಿ ಕಂಡು ಸಹನೆಯ ಸಾರಿದೆ ನೀನು.. ಕರುಣೆಯ ಕಡಲಲಿ ತೇಲುತ ಸಾಗುವ ನಿರ್ಭಯ ನೌಕೆಯು ನಾನು.. ಕಾಡುವ ಕಷ್ಟವ ಮೀರುತ ಸಾಗುವ ಭರವಸೆಯ-ಹುಟ್ಟು ನೀನು.. ಅವ್ವ ಎನ್ನುವ ಎರಡಕ್ಷರದಲೆ ಇದೆ ಎಲ್ಲಿಲ್ಲದ ಸ್ಫೂರ್ತಿ.. ನಿನ್ನಯ ನೆನಪೆ ನನಗದು ಕಲ್ಪತರು... ಮರೆಯಲಾಗದ ನೋವು... Missing you ಅವ್ವ ❤️❤️
ಸಾಣಿಕಟ್ಟೆಯ ಉಪ್ಪಿನಾಗರ
- Get link
- X
- Other Apps
ಸಾಂಪ್ರದಾಯಿಕಉಪ್ಪಿನತಯಾರಿಕೆ #ವರ್ಷ302 #ಐತಿಹಾಸಿಕಹಿನ್ನಲೆ #ಉತ್ತರಕನ್ನಡಜಿಲ್ಲೆಯಹೆಮ್ಮೆ ಉತ್ತರ ಕನ್ನಡ ಜಿಲ್ಲೆಯ ಕೆಂಪುಪ್ಪಿನ ಆಗರ ಸಾಣಿಕಟ್ಟಾ (ಕುಮಟಾ), ಹಡವ(ಅಂಕೋಲ) ಮತ್ತು ಶಿಂಗನಮಕ್ಕಿ (ಅಂಕೋಲ).. ಗೋಕರ್ಣಕ್ಕೆ ಹೋಗುವ ಪ್ರವಾಸಿಗರಿಗೆ ,ಇನ್ನೇನು ಗೋಕರ್ಣ ಮುಟ್ಟ ಬೇಕೆನಿಸುವಷ್ಟರಲ್ಲಿ ,ರಾಷ್ಟ್ರೀಯ ಹೆದ್ದಾರಿಯಿಂದ ಹೊರಳಿ, ಗೋಕರ್ಣದತ್ತ ಸಾಗುವಾಗ ಎಡಬಲದಲ್ಲಿ ಕಾಣಸಿಗುವ ಎಕರೆಗಟ್ಟಲೇ ಗಜನಿ ಭೂಮಿಯ ಮೇಲೆ ಹಿಮದ ರಾಶಿಯಂತೆ ಅಲ್ಲಲ್ಲಿ ಚೆಲ್ಲಿ ಬಿದ್ದಿರುವ ಪುಟ್ಟ ಪುಟ್ಟ ಬಿಳಿಯ ಗುಪ್ಪೆಗಳು ಇದಿರುಗೂಂಡು ಸ್ವಾಗತಿಸುವದೇ ನಮ್ಮ "ಸಾಣಿಕಟ್ಟೆಯ ಉಪ್ಪಿನಾಗರ " ----------‐------------------------------------------------- ಇದು ಗೋಕರ್ಣದ ನೆಲದ ಮತ್ತೊಂದು ವಿಶೇಷ ಹಾಗೂ ಇಲ್ಲಿನ ಜನರು ಕಷ್ಟಪಟ್ಟು ಸುರಿಸಿದ ಬೆವರಿನ ಫಸಲು. ಗೋಕರ್ಣಕ್ಕೆ ಹೊಂದಿಕೊಂಡಂತೆ ಇರುವ ಸಾಣಿಕಟ್ಟಾ, ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ಉಪ್ಪಿನ ಕಾರ್ಖಾನೆ . 1720ರಿಂದ ನಿರಂತರವಾಗಿ ಬೇಸಿಗೆಕಾಲದಲ್ಲಿ ಉಪ್ಪನ್ನು ತಯಾರಿಸುತ್ತಿರುವ ಈ ಪ್ರದೇಶ ಸರಿಸುಮಾರು 302 ವರ್ಷಗಳ ಇತಿಹಾಸವುಳ್ಳ ಉತ್ತರ ಕನ್ನಡಗರ ಹೆಮ್ಮೆಯ ಸ್ಥಳ. ಸಂಪೂರ್ಣವಾಗಿ ನೈಸರ್ಗಿಕ ಪದ್ಧತಿಯಲ್ಲಿ ಸೂರ್ಯನ ಶಾಖವನ್ನು ಬಳಸಿ ತಯಾರಿಸಲಾಗುವ ಈ ಉಪ್ಪಿನ ತಯಾರಿಕೆಗೆ ತಗಲುವ ಸಮಯ ಸರಿಸುಮಾರು ಮೂರು ತಿಂಗಳು. ಹೆಚ್ಚಿನ ಉಪ್ಪಿನಾಂಶವನ್ನು ಹೊಂದಿರುವ ಅಘನಾಶಿನಿ ನದ...
ಪ್ರ ಪ್ರಥಮ ಮಹಿಳಾ ವಚನಕಾರ್ತಿ..ಅಕ್ಕಮಹಾದೇವಿ.
- Get link
- X
- Other Apps
#ಅಕ್ಕಮಹಾದೇವಿ #ವಚನಕಾರ್ತಿ #ಕನ್ನಡದಪ್ರಥಮಮಹಿಳಾಕವಿಯತ್ರಿ #ಸ್ತ್ರಿವಾದಿಚಳವಳಿಯನಿಜವಾದಪ್ರತಿಪಾದಕಿ #SocialReformer #GenderEquality ಸುಮಾರು 800 ವರ್ಷಗಳ ಹಿಂದೆಯೇ ಕರುನಾಡಿನಲ್ಲಿ "ಮಹಿಳಾ ಸಮಾನತೆ"ಯನ್ನು ಪ್ರತಿಪಾದಿಸಿದ ದಿಟ್ಟ ಶಿವಶರಣೆ ,ಮಹಾನ್ ಸಾದ್ವಿ ಅಕ್ಕಮಹಾದೇವಿ. ಶರಣರ ಕಾಲದಲ್ಲಿ ರಾಜ್ಯ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ಮಹಾನ್ ಸಾಧ್ವಿ, ಸ್ತ್ರಿವಾದಿ ಚಳುವಳಿಯ ನಿಜವಾದ ಪ್ರತಿಪಾದಕಿ, ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಹಾರ್ದಿಕ ಶುಭಾಶಯಗಳು.🙏🙏🌹🌹 ‐----‐------------------------------------------------------ 12ನೇ ಶತಮಾನದ ಶರಣ ಚಳುವಳಿಯ ಶ್ರೇಷ್ಠ ಶಿವಶರಣೆ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಅನರ್ಘ್ಯ ಕೊಡುಗೆ ನೀಡಿದ ಕನ್ನಡದ ಪ್ರಥಮ ಕವಯತ್ರಿ, "ಶಿವಶರಣೆ ಅಕ್ಕಮಹಾದೇವಿ" ಶರಣೆ ಅಕ್ಕಮಹಾದೇವಿಯವರು ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರದ, ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಎಂಬ ಪುಟ್ಟ ಗ್ರಾಮದಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ದಂಪತಿಯರ ಮಗಳಾಗಿ ಜನಿಸಿದರು. ಅಕ್ಕಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ರಾಜ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಕ್ತಿಕಜೀವನಕ್ಕೆ ಅಡ್ಡಬರದಂತೆ ವರ್ತಿಸಬೇಕೆಂದು ಅಕ್ಕಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಿಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲ...
Prof.K .G.Naik,founder -Principal of G.C.COLLEGE, Ankola
- Get link
- X
- Other Apps
#APassionate Founder Principal of G.C.college, Ankola, Uttara Kannada, Prof K.G.Naik was one of the Iconic Aluminai of Ananandashram High School, Bankikoddla-Hanehalli. ------------------------------------------------------------ Prof. K.G. Naik was the founder Principal of Gokhale Centenary College, Ankola (1966 –1990) and Secretary of Kanara Welfare Trust (1970 – 2007) started by Dr. Dinakar Desai a great educationist, who has started education revolution in Uttara Kannada District. Prof. K.G.Naik was born in 1932, in Hanehalli. Completed his SSLC in Ananandashram High School in1950.He received his B.Sc.(Hons) in Mathematics and M.Sc. in Mathematics from Karnataka University,Dharwad. He was a merit scholar through out his studies. He started his career as Lecturer in Mathematics at Kabbur Institute of Engineering,(now called as KHK),JSS, Dharwad . Later ,Head of Department of Mathematics (HOD)at Karnatak Arts and Science College, Dharwad. He was nominated for the Vice C...
ಕರುಣಾಳು ಬಾ ಬೆಳಕೆ..ಅಂಕೋಲೆಯ ಶಿಕ್ಷಣ ದಾನಿ ಸ.ಪ.ಗಾಂವಕರ 🙏🙏
- Get link
- X
- Other Apps
#ಉತ್ತರಕನ್ನಡಜಿಲ್ಲೆ #ಮಹಾನ್ ಚೇತನ #ಸ.ಪ.ಗಾವಂಕರ #ಶತಮಾನೋತ್ಸವ #ನಾಡವರಸಂಘ #ಕರ್ನಾಟಕದಬಾರ್ಡೋಲಿ #ನಮ್ಮಹೆಮ್ಮೆ #Congratulations 🙏🙏🌹🌹🌹 ಇಂದು ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಅನೇಕ ಮಹನೀಯರ ತ್ಯಾಗ ಹಾಗೂ ಬಲಿದಾನವೇ ಕಾರಣ. ಅಂತಹ ಮಹನೀಯರ ಪಟ್ಟಿಯಲ್ಲಿ ದಿನಕರ ದೇಸಾಯಿಯವರ ಜೊತೆಗೆ ಸರಿಸಮನಾದ ನಿಲ್ಲುವ ಹಳೆಯ ತಲೆಮಾರಿನ ಇನ್ನೊಂದು ಹೆಸರು "ಸಣ್ಣಪ್ಪ ಪರಮೇಶ್ವರ ಗಾವಂಕರ". ಅಂತಹ ಮೇರು ವ್ಯಕ್ತಿತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವದು ನಮ್ಮೆಲ್ಲರ ಕರ್ತವ್ಯವೂ ಹೌದು. ------------------------------------------------------------ ಸಣ್ಣಪ್ಪ ಪರಮೇಶ್ವರ ಗಾಂವಕರ , 11 ಜನವರಿ 1885 ರಂದು ಕುಮಟಾ ತಾಲ್ಲೂಕಿನ ಪುಟ್ಟ ಗ್ರಾಮ ತೊರ್ಕೆಯಲ್ಲಿ ಜನಿಸಿದರು. ಅವರು ಅದೇ ತಾಲ್ಲೂಕಿನ ತದಡಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಮ್ಮ 40 ನೇ ವಯಸ್ಸಿನಲ್ಲಿ (1925), ಗಾಂವಕರರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಿಂದ ಬಿ. ಎ ಪದವಿಯನ್ನು ಪಡೆದರು. ಅವರು ಹುಬ್ಬಳ್ಳಿ ಪುರಸಭೆಯಲ್ಲಿ ಅಧಿಕಾರಿಯಾಗಿದ್ದರು. 1942 ರಲ್ಲಿ ತಮ್ಮ ನಿವೃತ್ತಿಯ ನಂತರ, ಸ.ಪ. ಗಾಂವಕರರು ಅವರು "ಕ್ವಿಟ್ ಇಂಡಿಯಾ ಚಳುವಳಿ "ಯಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ...
ನನ್ನಪ್ಪ ಶೀಳ್ಯಯ ಬೊಮ್ಮಯ್ಯ ಮಾಸ್ತರ..
- Get link
- X
- Other Apps
"ಅಪ್ಪ" ಎನ್ನುವ ಪದವೇ ಅದ್ಭುತ .ಸಂಸಾರದ ನೊಗ ಹೊತ್ತು ಗಾಣದ ಎತ್ತಿನಂತೆ ದುಡಿದ ಸ್ವಾಭಿಮಾನಿ ನನ್ನಪ್ಪ 5-03-2022ರಂದು ನಮ್ಮೆಲ್ಲರನ್ನು ಬಿಟ್ಟು ತನ್ನ 96ನೆಯ ವಯಸ್ಸಿಗೆ ಇಹಲೋಕ ಯಾತ್ರೆ ಕೈಗೊಂಡಿದ್ದು ತುಂಬಾ ದುಃಖದ ವಿಷಯ. ಶೀಳ್ಯಯ ಬೊಮ್ಮಯ್ಯ ಮಾಸ್ತರರು ಇನ್ನಿಲ್ಲ... ಬೊಮ್ಮಯ್ಯ ಮಾಸ್ತರ ಹುಟ್ಟಿದ್ದು ಜೂನ 21,1936ರಲ್ಲಿ ಶೀಳ್ಯಯ ರಾಮ ಅನಂತ ನಾಯಕ ಹಾಗೂ ಹೊನ್ನಮ್ಮ ನಾಯಕ ದಂಪತಿಯರ ಎರಡನೆಯ ಮಗನಾಗಿ. ಆಗ ನಮ್ಮ ಭಾರತ ಬ್ರಿಟಿಷರ ದಬ್ಬಾಳಿಕೆಯಲ್ಲಿ ನಲುಗುತ್ತಿತ್ತು.ಬ್ರಿಟಿಷರು ಕಂಡ ಕಂಡ ಭಾರತೀಯ ಹುಡುಗರನ್ನು ಜೈಲೊಳಗೆ ತುಂಬುವ ಕಾಲ, ಅಂತಹ ಸಂದರ್ಭದಲ್ಲಿ ನಾಡವರ ಸಮುದಾಯದ ಮಹಾನ್ ಚೇತನ ಸ.ಪ.ಗಾಂವಕರರು ನಾಡವರ ಹುಡುಗರನ್ನು ಬ್ರಿಟಿಷರಿಂದ ತಪ್ಪಿಸುವ ಸಲುವಾಗಿ ಬನಾರಸ ವಿಶ್ವವಿದ್ಯಾಲಯಕ್ಕೆ ಕಳುಹಿಸಲು ತಯಾರಿ ನಡೆಸಿ ಉತ್ತರ ಭಾರತದ ರೈಲನ್ನು ಹತ್ತಿಸಿ ಬಿಡುತ್ತಾರೆ.ಅಂತಹ ಐದು ಜನ ಹುಡುಗರಲ್ಲಿ ಬೊಮ್ಮಯ್ಯ ಮಾಸ್ತರರು ಒಬ್ಬರು. ಉತ್ತರ ಭಾರತದ ಅಯ್ಯೋಧೆಯ ಕಾಶಿ ವಿದ್ಯಾಪೀಠದ ಗುರುಕುಲದಲ್ಲಿ ಸತತ ಆರು ವರ್ಷ ಸಂಸ್ಕೃತ ಅಧ್ಯಯನ ನಡೆಸಿ, ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೆಚ್ಚಿಸಿಕೊಂಡು, ಅಲ್ಲಿನ ಸಂಸ್ಕಾರಕಗಳನ್ನು ಪಾಲಿಸಿ,ಸತ್ಯ,ನಿಷ್ಠೆಗೆ "ಬೊಮ್ಮಯ್ಯ " "ಸತ್ಯೇಂದ್ರ" ನಾಗಿ ಮರುನಾಮಕರಣಗೂಂಡು,ಸತ್ಯೇಂದ್ರ ರಾಮ ನಾಯಕ ಆಗುತ್ತಾರೆ.ಅಯ್ಯೋಧೆಯ ಕಾಶಿ ವಿದ್ಯಾಪೀಠದಲ್ಲಿ ಹ...
ನನ್ನವ್ವ ಹನಮು
- Get link
- X
- Other Apps
ಇವಳು ಹಳ್ಳಿಯ ಮುಗ್ಧೆ..ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಪುಟ್ಟ ಗ್ರಾಮ ಬೇಲೇಕೇರಿಯಲ್ಲಿ.ಬೀರಪ್ಪ -ವೆಂಕಮ್ಮ ದಂಪತಿಯರ ಎರಡನೆಯ ಪುತ್ರಿಯಾಗಿ ಜನಿಸಿದ ಹನಮು ಶಾಲೆ ಕಲಿತದ್ದು ಕೇವಲ ಮೂರನೆಯ ತರಗತಿಯವರೆಗೆ ಮಾತ್ರ. ಯಾಕೆ ಶಾಲೆ ಕಲೆಯಲಿಲ್ಲ ಎಂದು ಕೇಳಿದಾಗ ಅವಳು ಹೇಳುವ ಉತ್ತರ "ನನ್ನ ಸಣ್ಣ ತಮ್ಮನನ್ನು ಆಡಿಸಲು ನನ್ನ ತಂದೆ-ತಾಯಿ ಶಾಲೆ ಬಿಡಿಸಿದರು". ಹೌದು, ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರಲ್ಲಿಲ್ಲ ! ಅನುಕೂಲ ಇದ್ದವರು ಏಳನೆಯ ತರಗತಿಯ ವರೆಗೆ ಕಲಿಸಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಬಿಡುತ್ತಿದ್ದರು. ಆಗಿನ ಕಾಲದಲ್ಲಿ ಏಳನೆಯ ತರಗತಿಯವರೆಗೆ ಕಲಿತರೆ ಪ್ರಾಥಮಿಕ ಶಾಲೆಯ ಶಿಕ್ಷಕಿಯರ ನೌಕರಿ ಸಿಗುತ್ತಿತ್ತು. ಅವಳಿಗೆ ಹದಿನೈದು ತುಂಬುವ ಮೊದಲೇ ತಮ್ಮ ಸಂಬಂಧಿಕರಾದ ಶೀಳ್ಯಯ ರಾಮ ಅನಂತ ನಾಯಕರ ಎರಡನೆ ಮಗನಾದ ಬೊಮ್ಮಯ್ಯನಿಗೆ ಮದುವೆ ಮಾಡಿಕೊಟ್ಟು ಬಿಟ್ಟಿದ್ದರು.ಬೊಮ್ಮಯ್ಯ ಅಯ್ಯೋಧೆಯ ಸಂಸ್ಕೃತ ಪಾಠಶಾಲೆಯಲ್ಲಿ ಶಿಕ್ಷಣ ಮುಗಿಸಿ ಅಂಕೋಲಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗಿನ ಕಾಲದ ವೇತನ ತುಂಬ ಕಡಿಮೆ ,ಸಂಸಾರ ಸಾಗಿಸಲು ಸಾಧ್ಯವಾಗುತ್ತಿರಲ್ಲಿಲ್ಲ . ಮುಂದೆ ಶಿಕ್ಷಣ ಮುಂದುವರಿಸಿದ ಬೊಮ್ಮಯ್ಯ ಮಾಸ್ತರ ಸಂಸ್ಕೃತದಲ್ಲಿ ವಿಶಾರದ (ಎಮ್. ಎ ಗೆ ಸಮಾನ) ಮುಗಿಸುತ್ತಾರೆ...
ನಾನು ನಿನ್ನ ಭೂಮಿ..ಉಳಿಸಿಕೋ ನನ್ನನ್ನು ....ಎಲೆ ಮಾನವ !! ----------------------------------------------------- ನಾನು ಭೂಮಿ ಒoಬತ್ತು ಗ್ರಹಗಳಿಗಿoತ ಭಿನ್ನ ನಾನು!ನೀಲಿ ನನ್ನ ಕಾಯ ಹಸಿರು ನನ್ನ ಮೈ ಕಾoತಿಹಿಮವೆ ನನ್ನ ಶಿರೋ ಮುಕುಟ,ಸೌಂದರ್ಯ ಯದ ಖನಿ ನಾನು!ತಿರುಗುವೆನು ನನ್ನಷ್ಟಕ್ಕೆ ನನ್ನ ಸುತ್ತ ನಾನು ಮಾಡುತ್ತಾ ಸಾಗುತ್ತಿರುವೆ ಹಗಲು -ರಾತ್ರಿಯ ಕಣ್ಣಾಮುಚ್ಚಾಲೆಯ ನಾನು! ದಣಿವರಿಯದೇ ಸುತ್ತುತ್ತಿರುವೆ ಸೂರ್ಯನ ಸುತ್ತ ನಾನು! ಬದಲಿಸುತ್ತಿರುವೆ ನನ್ನ ಮೈಕಾಂತಿಯ ಋತುವಿಗನುಗುಣವಾಗಿ ನಾನು! ಕಟ್ಟುವೆನು ಮೋಡವ ,ಸುರಿಸುವೆನು ಮಳೆಯಹಸಿರುಡುಗೆಯ ತೊಟ್ಟು ಸಂಭ್ರಮಿಸುವೆನು ನಾನು! ನನ್ನೊಡಲು ತುಂಬಿದೆ ಜೀವ ವೈವಿಧ್ಯಗಳ ರಾಶಿ!ಒಡಲ ತುಂಬ ತುಂಬಿದೆ ನಿಧಿ-ಖನಿಜಗಳ ರಾಶಿ! ಚಂದ್ರ ನನಗೆ ಉಪಗ್ರಹ ಸುತ್ತುತಿರುವ ತರತರ,ಹುಣ್ಣಿಮೆ- ಅಮಾವಾಸ್ಯೆಯ ಆಯಸ್ಕಾಂತದ ಪರಿಕರ ! ನನ್ನ ತುಂಬ ಪ್ರಾಣವಾಯು ಉಸಿರು ಕೊಡುವೆ ಜೀವಕೆ ವೈವಿಧ್ಯಕೆ ಇಂಗಾಲವ ಹೀರಿಕೊಂಡು ಇಡುವೆ ಸ್ವಸ್ಥ ಜೀವಕೆ ! ಪೊರೆವ ನಿಮ್ಮ ಒಡಲ ತುಂಬ ಮಮತೆಯ ಮಾತೆಯಾಗಿ!ಸಲಹುತಿರುವೆ ಎಲ್ಲರನ್ನುಭೂಮಿತಾಯಿಯಾಗಿ! ನನ್ನೊಳಗಿನ ಜೀವಿಗಳಲ್ಲಿ ಮಾನವ ನೀನು ಬಲು ವಿಶೇಷ ! ಯಾವ ಜೀವಿಗಳಲ್ಲೂ ಇಲ್ಲದ ಗುಣ ವೈವಿಧ್ಯ,ಆದರೆ ತುಂಬಿದೆ ದುರಾಸೆಯ ವಿಷ!ಅಭಿವೃದ್ಧಿಯ ಹೆಸರಿನಲ್ಲಿ ದೋಚುತಿರುವೆ ನನ್ನೊಡಲ ಖಾಲಿಮಾಡುತಿರುವೆ ತುಂಬಿದ ನಿಧಿ-ಖನಿಜಗಳ ಒಡಲ! ನಿನ್ನ ದುರಾಸೆಯ ದಳ್ಳುರಿಗೆ ಬಲಿ ಕೊಡುತ್ತಿರುವೆ ನನ್ನ ಮಡಿಲ! ನನ್ನೊಡಲ ಬಗಿದು ಬರಿದು ಮಾಡುತ್ತಿರುವೆ!!ಕಾರ್ಖಾನೆಯ ದೂಷಿತ ಹೊಗೆಯ ಬಿಟ್ಟು ಪರಿಸರವ ನಾಶಪಡಿಸುತಿರುವೆ!! ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣಹೋಮ ಮಾಡುತ್ತಿರುವೆ!! ನೀ ಬಿಡುತ್ತಿರುವೆ ವಿಷಯುಕ್ರ ಮಲೀನ ನೀರನು ನನ್ನ ನೀಲಿ ಮಡಿಲಿಗೆ.!! ನಿನ್ನದಲ್ಲದ ಕಾಡಿಗೆ ನುಗ್ಗಿ ಪ್ರಾಣಿ- ಪಕ್ಷಿಗಳ ಸಂತತಿ ಅಳಿಸುತ್ತಿರುವೆ!! ಕಾಡಿನ ಬೆಲೆಬಾಳುವ ಮರಗಳ ಮಾರಣಹೋಮ ಹೋಮ ಮಾಡಿ ನಿನ್ನ ಬೊಕ್ಕಸವ ತುಂಬಿಕೊಂಡು ಕಾಳ್ಗಿಚ್ಚಿನಿಂದ ನನ್ನ ಹಸಿರ ಮೈಕಾಂತಿಯ ಸುಡುತ್ತಿರುವೆ!!ಒಂದೊ,ಎರಡೋ......ಲೆಕ್ಕವೇ ಇಲ್ಲದ ದೌರ್ಜನ್ಯಗಳು ನನ್ನ ಮೇಲೆ!! ನೀ ಮಾಡುತ್ತಿರುವ ಕುಕೃತ್ಯದಿಂದ ನನ್ನೊಡಲು ಬರಿದಾಗುತ್ತಿದೆ, ಪ್ರಾಣಿ-ಪಕ್ಷಿಗಳ ಸಂತತಿ ನಶಿಸಿ ಹೋಗುತ್ತಿದೆ !! ನನ್ನೊಡಲು ಕಾದ ಕಾವಲಿಯಂತಾಗುತ್ತಿದೆ ನನ್ನ ಹಿಮ ಮುಕುಟ ಕರಗುತ್ತಿದೆ!! ಮಹಾಮಾರಿ ವೈರಸಗಳಿಂದ ಮುಖ-ಮೋರೆ ಮುಚ್ಚಿಕೊಂಡು ಮನೆಯನ್ನು ಪಂಜರವನ್ನಾಗಿಸಿ ಕೊಂಡಿರುವೆ!! ಜೀವಾನಿಲವಿಲ್ಲದೆ ವಿಲ -ವಿಲ ಒದ್ದಾಡಿ ಹುಳುಗಳಂತೆ ಸಾಯುತ್ತಿರುವೆ....ಇನ್ನಾದರೂ ಎಚ್ಚತ್ತುಕೊ ಮನುಜ ಎಚ್ಚತ್ತುಕೊ ....ನನ್ನ ಉಳಿಸಿಕೋ ಉಳಿಸಿಕೋ ನನ್ನ!!! 😢😢😢
- Get link
- X
- Other Apps
ಶಾಲ್ಮಲೆ ನೀ ಗುಪ್ತಗಾಮಿನಿ!!!!
- Get link
- X
- Other Apps
ಹೌದು!! ಶಾಲ್ಮಲೆ ನೀ ಗುಪ್ತಗಾಮಿನಿ..ಆದೆ ನೀ ಗಂಗಾವಳಿ.. ---‐--‐---------------------‐---‐------------------ ಹುಟ್ಟಿದ್ದು ಧಾರವಾಡದ ಲಕ್ಕಮನಹಳ್ಳಿಯ ಅಗಸ್ತ್ಯ ತೀರ್ಥದ ಕಲ್ಯಾಣಿಯಲ್ಲಿ... ಕೂಗಳತೆಯಲ್ಲಿ ಕುಳಿತಹ ಸೋಮೇಶ್ವರ ಜಕ್ಕಣಚಾರಿ ಕಡೆದ ಮಂದಿರದಲ್ಲಿ.. ಪಕ್ಕದಲ್ಲಿ ಹರಿದೆ ಕಮಲದ ಕೆರೆಯಾಗಿ ಒಳಗೊಳಗೆ ಹರಿದೆ ಗುಪ್ತಗಾಮಿನಿಯಾಗಿ .. ನೀ ಹುಟ್ಟಿದ ಸ್ಥಳ ಬಟ್ಟೆ ಒಗೆಯುವ ತಾಣ ಕಬಳಿಸಿದ ನಿನ್ನ ಭೂಮಾಫಿಯಾದ ಜಾಣ.. ಬಿಟ್ಟರು ನಿನ್ನೊಡಲಿಗೆ ಕೊಳಚೆ ನೀರನ್ನು ಹೊಲಸು ಮಾಡಿದರು ನಿನ್ನೊಡಲನ್ನು.. ದುಗುಡ ದುಮ್ಮಾನಗಳ ಉರಿಯೊಳಗೆ ಹರಿದೆ ಗುಪ್ತಗಾಮಿನಿಯಾಗಿ ಒಳಗೊಳಗೆ .. ಕೊಡಿದೆ ನಿನ್ನ ಗೆಳತಿ ಬೇಡ್ತಿಯ ಜೊತೆಗೆ ಹುಡುಗಾಟ ಮಾಡುತ್ತಾ ಸಾಗಿದೆ ಕಲಘಟಗಿ ಯವರೆಗೆ ... ಅರವತ್ತು ಮೈಲಿ ಧಾರವಾಡದ ನಿನ್ನ ಪಯಣ ಶಾಂತವಾಗಿ ಒಳ್ಳಗೂಳಗೆ ನಿನ್ನಯ ಯಾನ ನಿನ್ನೆಯ ಪ್ರವೇಶ ಉತ್ತರ ಕನ್ನಡ ಜಿಲ್ಲೆಗೆ ಬಾಲ್ಯ ಕಳೆದು ...
Tribute to Jagadishanna(My cousin brother)
- Get link
- X
- Other Apps
ಭಾವ ಪೂರ್ಣ ಶ್ರದ್ಧಾಂಜಲಿ -------‐------------------ ಅಣ್ಣಾ!! ಏಕಣ್ಣಾ ಬಾರದ ಲೋಕಕ್ಕೆ ನಿನ್ನಯ ಪಯಣ? ನಿನ್ನವರನ್ನು ಬಿಟ್ಟು ಹೊರಟು ಬಿಟ್ಟೆ ಏಕಾಂಗಿಯಾಗಿ , (ಅಂಕೋಲಾ)ಶಿಳ್ಳೆಯ ಊರೇ ಖಾಲಿಯಾದ ಅನುಭವ, ಅನಂತನ ಮನೆಯಲ್ಲಿ ಪಾದರಸ ದಂತೆ ಓಡಾಡುವ ನೀನು ಏಕಾಏಕಿ ಹೊರಟೇ ಬಿಟ್ಟೆಯಲ್ಲ .. ....ಏನು ಅವಸರವಿತ್ತು ನಿನಗೆ ಅಣ್ಣಾ? ಕಷ್ಟಕ್ಕೆ -ಸುಖಕ್ಕೆ ಜೊತೆ ಯಾದ ನೀನು ಎಲ್ಲವನ್ನು ತೊರೆದು ನಮ್ಮನ್ನು ಬಿಟ್ಟು ಹೊರಟು ಬಿಟ್ಟೆ ..ಏನು ಅವಸರವಿತ್ತು ನಿನಗೆ ಅಣ್ಣಾ !!! ನಿನ್ನ ಪವಿತ್ರವಾದ ಆತ್ಮ ಎಂದೆಂದಿಗೂ ಸದ್ಗತಿ ಯನ್ನು ಹೊಂದಲಿ ಎಂದು ಹಾರೈಸುವ ನಿನ್ನ ಚಿಕ್ಕ ತಂಗಿ...ಮತ್ತೆ ಹುಟ್ಟಿ ಬಾ.. ಡಾ.ಮಂಗಲಾ ನಾಯಕ ಯರಗಟ್ಟಿ ಹಾಗೂ ಕುಟುಂಬ, ಧಾರವಾಡ.
IRON LADY OF ASSAM
- Get link
- X
- Other Apps
#IronLadyOfAssam #BraveIPSOfficer #InspirationToYoungGirls #WomenEmpowerment #FeelingProud👍👍👏👏 --------------------------------------------------------- Sanjukta Parashar is known as the Iron Lady of Assam. This female IPS Officer killed 16 millitants and arrested over 64 terrorists and seizing tons of arms and ammunition in just 15 months. A brave IPS Officer who is NIGHTMARE for millitants in Assam. She is an IPS Officer of 2006 Batch.She was first posted as the Assistant Commandant of Makum in 2008.She was soon giving the responsibility of controlling the clashes between Bodo and illegal Bangladeshi Millitants. She completed her graduation in Political Science from IP College,Delhi University. She did her Masters in International Relations from JNU,New Delhi. She had completed MPhil and persuing PHD in U S Foreign Policy As a Superitendent of Police in Sonitpur District, she had a team of CRPF jawans with AK-47 in the terror-infested regi...
Traditional Folk Dance: Suggi Kunita
- Get link
- X
- Other Apps
"ಹೋಳಿ ಹುಣ್ಣಿಮೆ "ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ " ಅಂಕೋಲಾದ ಸುಗ್ಗಿ ಹಬ್ಬ " ---------‐----------‐------------------------------- ಉತ್ತರ ಕನ್ನಡ ಜಿಲ್ಲೆ ಸಾಂಪ್ರದಾಯಿಕ ಜಾನಪದ ಕಲೆಗಳಾದ ಯಕ್ಷಗಾನ ,ಬೇಡರವೇಷ ,ಸುಗ್ಗಿ ಕುಣಿತ ಮುಂತಾದವೂಗಳ ತವರರೂರು. ಹೋಳಿ ಹುಣ್ಣಿಮೆಯ ಬಣ್ಣದ ಓಕುಲಿ ಹಬ್ಬವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ವಾಗಿ "ಸುಗ್ಗಿ ಹಬ್ಬ "ವೆಂದು ಆಚರಿಸಲಾಗುತ್ತದೆ. ಜಿಲ್ಲೆಯ ಬುಡಕಟ್ಟು ಜನಾಂಗದ ಹಾಲಕ್ಕಿ ಒಕ್ಕಲಿಗರು ಸುಗ್ಗಿ ಹಬ್ಬ ವನ್ನು ಭಕ್ತಿ -ಭಾವದಿಂದ ಐದು ದಿನ ಆಚಾರಿಸುತ್ತಾರೆ . ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಜಿಲ್ಲೆಗಳಲ್ಲಿ ವಿಶಿಷ್ಟವಾಗಿ ಕಂಡು ಬರುತ್ತಾರೆ. ಇವರ ಮೂಲ ಕಸಬು ಕೃಷಿ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಇಂದು ಕೃಷಿ ಜೀವಂತವಾಗಿದೆ ಎಂದರೆ ಅದಕ್ಕೆ "ಹಾಲಕ್ಕಿ ಒಕ್ಕಲಿಗರು " ಎಂದರೆ ಅತಿಶಯೋಕ್ತಿ ಆಗಲಾರದು . ಅಂಕೋಲಾ ತಾಲ್ಲೂಕಿನ ಬೆಳಂಬಾರ,ಬಡಿಗೇರಿ,ಹಡವ,ಬೆಳಸೆ ಮುಂತಾದ ಊರುಗಳಲ್ಲಿ ನೆಲೆಸಿರುವ ಹಾಲಕ್ಕಿ ಒಕ್ಕಲಿಗರು ತರಕಾರಿ, ಹಣ್ಣು- ಹಂಪಲುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಾರೆ. ...
Rural Godess of Nature
- Get link
- X
- Other Apps
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡಿದ ಅಕ್ಷರಶಃ ಅಕ್ಷರ ಕಲಿಯದ ಹಾಲಕ್ಕಿ ಒಕ್ಕಲಿಗ ಮಹಿಳೆಯರು ನಿಜವಾದ ಕನ್ನಡಿಗರು #ತುಳಸಿ ಗೌಡ #ಸುಕ್ರಿ ಗೌಡ #ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು #Inspring Rural Women . -------------------------------------- ಅಕ್ಷರ ಕಲಿಯದ ,ಬಡತನದ ಬೇಗೆಯನ್ನು ಹೊತ್ತ ಈ ಮಹಿಳೆಯರು ನಿಜವಾದ ಕನ್ನಡಿಗರು!! ನಮ್ಮ ಪರಿಸರ, ನಮ್ಮ ಭಾಷೆ ಹಾಗೂ ನಮ್ಮ ಸಂಸ್ಕೃತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಚಾರವನ್ನು ಬಯಸದೇ ತಮ್ಮದೇ ದಾರಿಯಲ್ಲಿ ಬದುಕುತ್ತಿರುವ ನಿಜವಾದ ದೇಶ ಭಕ್ತರು . ಸಮಾಜಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಹಾಲಕ್ಕಿ ಒಕ್ಕಲಿಗರು. ಈ ಸಮುದಾಯವು ಕರ್ನಾಟಕ ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ,ಕುಮಟಾ,ಹೊನ್ನಾವರ ತಾಲ್ಲೂಕುಗಳಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ಹಾಲಕ್ಕಿಗಳು ಕೃಷಿಯನ್ನು ಜೀವನಾಧಾರವಾಗಿರಿಸಿಕೊಂಡಿರುತ್ತಾರೆ. ಇವರು ಆದಿವಾಸಿ ಜೀವನ ಪದ್ಧತಿಯನ್ನು ಅನುಸರಿಸಿ ಪರಿಸರವನ್ನು ಉಳಿಸಿ -ಬೆಳೆಸುವಲ್ಲಿ ತಮ್ಮ ಅಮೂಲ್ಯವಾದ ಕೊಡಿಗೆಯನ್ನು ನೀಡಿರುತ್ತಾರೆ. #ಸುಕ್ರಿಗೌಡ #ತುಳಸಿಗೌಡ !! ಈ ಮಹಿ...